Sunday, November 9, 2025

ನುಡಿಹಬ್ಬ - ನಮ್ಮ ಕನ್ನಡ ರಾಜ್ಯೋತ್ಸವ

ಎಲ್ಲರಿಗೂ ನಮಸ್ಕಾರ . 

ಕನ್ನಡ ರಾಜ್ಯೋತ್ಸವ, ನಮ್ಮ ಕನ್ನಡಮ್ಮನ ಹಬ್ಬ. ಎಷ್ಟೊಂದು ಸಂಸ್ಥೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ, ಆಸ್ಥೆಯಿಂದ ಆಚರಿಸುತ್ತಾರೆ, ಸಂಭ್ರಮಿಸುತ್ತಾರೆ. 
ಕೆಲವಂತೂ ಬಹಳಷ್ಟು  ನಾವೀನ್ಯತೆಯಿಂದ, ಕ್ರಿಯಾಶೀಲತೆಯಿಂದ ಕೂಡಿರುತ್ತದೆ. 

ಇವೆಲ್ಲ ಆಚರಣೆಯ ಒಂದು ಪರಿಚಯವನ್ನು ಒಂದು ಕಡೆ ಹಿಡಿದಿಟ್ಟರೆ ಮತ್ತಷ್ಟು  ಸಂಸ್ಥೆಗಳಿಗೆ, ಜನರಿಗೆ ಸ್ಫೂರ್ತಿಯಾಗಬಲ್ಲುದು. 

ಹಾಗಾಗಿ ನಿಮ್ಮಲ್ಲಿ ಒಂದು ಕೊರಿಕೆ. ನಿಮ್ಮ ರಾಜ್ಯೋತ್ಸವದ ಆಚರಣೆಯ ಒಂದು ಲೇಖನವನ್ನು ಚಿತ್ರದ ಜೊತೆಗೆ ಕಳುಹಿಸಿಕೊಡಿ. 
ಜೊತೆಗೆ ಯಾರಾದರು ಇಬ್ಬರ ಸಂಪರ್ಕದ ವಿವರಗಳನ್ನೂ ಕಳುಹಿಸಿ (ಇದನ್ನು ಎಲ್ಲೂ  ಪ್ರಕಟಿಸುವುದಿಲ್ಲ. ಯಾರಿಗಾದರೂ ನಿಮ್ಮ ಆಚರಣೆಯ ಬಗ್ಗೆ ಮಾಹಿತಿ ಬೇಕಾದರೆ ಅವರಿಗೆ ಮಾತ್ರ ಕೊಡಲಾಗುವುದು). 

ಇಂತಿ ನಿಮ್ಮ,
ಗೆಳೆಯ 
NudiHabba@gmail.com

No comments:

Post a Comment